Monday, April 15, 2013

ನೆನಪಿನಂಗಳದಿಂದ ಒಂದಿಷ್ಟು ........

       ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಎಂದಿಗೂ ನೆನಪಿನಲ್ಲಿ ಹಾಗೆ ಉಳಿದುಬಿಡುತ್ತವೆ. ಕೆಲವು ಮನಸ್ಸಿಗೆ ಮುದ ನೀಡಿದರೆ ಇನ್ನು ಕೆಲವು ಜೀವನದ ಪಾಟವನ್ನು ಕಲಿಸಿರುತ್ತವೆ . ಆದರು ಆಗಾಗ ಮನಸಿನ ಪರದೆ ಮೇಲೆ ಬಂದು ಹೋಗುವ ಈ ನೆನಪುಗಳು ಕೊಡುವ ಖುಷಿಯೇ ಬೇರೆ .  ನನ್ನ ನೆನಪಿನ ಬುತ್ತಿಯಿಂದ ಆಯ್ದ ಕೆಲವು ಘಟನೆ, ವಿಷಯಗಳನ್ನ ಇಲ್ಲಿ ಬರೆದಿದ್ದೇನೆ ಇಷ್ಟವಾದರೆ ಖ೦ಡಿತ ಕಾಮೆಂಟ್ ಮಾಡಿ . 
ಸುಮಾರು ಹದಿನಯ್ದು  ವರ್ಷಗಳ ಹಿಂದೆ ನಡೆದ ಘಟನೆ ಇದು .ಸದಾ ಕಾಡನ್ನು ಸುತ್ತುತಿದ್ದ ನಮಗೆ ಕಾಡಲ್ಲಿ ಒಂದು ಸ್ತಳದ ಬಗ್ಗೆ ಏನೋ ಒಂದು ತರಹದ ಕುತೂಹಲ ..ಕುತುಹಲ ಎನ್ನೋದಕಿಂಥ ಹೆದರಿಕೆ ಅನ್ನೋದೇ ಸೂಕ್ತ ಅನ್ಸತ್ತೆ . ಆ ಸ್ಥಳವೆ ಶಂಬು ಭಟ್ಟನ ಕಟ್ಟೆ (ಶಂಬು ಭಟ್ಟನ ಕಟ್ಟೆ ಊರವರ ದೆವ್ವದ ಕಟ್ಟು ಕಥೆ ಗಳಿಂದ ಕುಖ್ಯಾಥಿ ಹೊಂದಿತ್ತು). ಇಲ್ಲಿ ಸಾಗುವವರಿಗೆ ಆ ಚಿತ್ರ ವಿಚಿತ್ರ ಅನುಭವಗಳು ಎಂತವರಿಗೂ ನಡುಕ ಹುಟ್ಟಿಸುವನ್ತದ್ದು. ಸಂಜೆ ೬ ರ ನಂತರ ಯಾರೊಬ್ಬರು ಆ ಕಡೆ ತಲೆ ಇಟ್ಟು ಕೂಡ ಮಲಗುತ್ತಿರಲಿಲ್ಲ.ಇಲ್ಲಿ ಕಥೆ ಹೇಗೆ ಹುಟ್ಟುತಿತ್ತು? ಈ ಘಟನೆಯನ್ನ ಓದಿ ನಿಮಗೆ ಅರ್ಥವಾಗತ್ತೆ.
   ನಮಗೆ ಏನೇ ಅಗತ್ಯ ವಸ್ತು ಗಳು ಬೇಕಾದರೂ ಸುಮಾರು ೬ km ನಡೆದು ಸಾಗಿ ಕೊಳ್ಳಬೇಕು. ಅದು ಕೂಡ ಕಾಡಿನ ದಾರಿಯಲ್ಲೇ ಸಾಗಬೇಕು. ಈ  ದಾರಿಯಲ್ಲಿ  ಸಿಗುವ ಒಂದೊಂದು ಪ್ರದೇಶವು ವಿಶಿಷ್ಟ ರೀತಿಯ ನಂಬಿಕೆ ಗಳಿಂದ ಪ್ರಸಿದ್ದವಾಗಿದೆ.. ಕೆಲವು ದೇವರ ಜಾಗವೆಂದು ಪ್ರಸಿದ್ದವಾದರೆ ಇನ್ನು ಕೆಲವು ದೆವ್ವಗಳ ವಾಸಸ್ಥಾನ ವೆಂದು ಪ್ರಸಿದ್ದವಾಗಿದೆ. ಅದರಲ್ಲೂ ಈ ಶಂಬುಬಟ್ಟನಕಟ್ಟೆ ಮೊದಲೇ ಕುಖ್ಯಾತಿ ಹೊಂದಿದ ಜಾಗ್.
ತನ್ನ ವಿಶಿಷ್ಟ ರೀತಿಯ ಮ್ಯಾನರಿಸಂ ನಿಂದ ಎಲ್ಲ ಮಕ್ಕಳಿಗೂ ತುಂಬಾ ಇಷ್ಟವಾಗುತಿದ್ದ ದಿನುಕಾಕ . ಅಸ್ಟೆ ಅಲ್ಲ ಎಲ್ಲರನ್ನು ಗೋಳು ಹೊಯ್ಕೊಲೋದ್ರಲ್ಲು ಎತ್ತಿದ ಕೈ. ಆದರು ಎಲ್ಲರಿಗು ಎಲ್ಲ ಕೆಲಸಕ್ಕೂ ಇವನೇ ಬೇಕು. ಎಂತವರು ಓಡಾಡಲು ಹೆದರುತಿದ್ದ ದಾರಿಯಲ್ಲಿ ಎಸ್ಟೆ ರಾತ್ರಿ ಯಾದರು ಒಬ್ಬನೇ  ಸಾಗುವ ಧೈರ್ಯವಂತ.
 ಇ ಘಟನೆಯ ಮುಖ್ಯ ಫಾತ್ರದಾರಿಯ ಪರಿಚಯ ನಿಮಗೆ ಮಾಡಿ ಕೊಡಲೇ ಬೇಕು. ಹೆಸರು ಪಕೀರಪ್ಪ ಗೌಡ. ನಮ್ಮ ಮನೆಯಲ್ಲಿ ತೋಟದ ಕೆಲಸ ಮಾಡಲು ಬರುತ್ತಿದ್ದ ಆಳು . ನಮಗೆಲ್ಲರಿಗೂ ದೆವ್ವದ ಕಥೆ ಗಳನ್ನ ಹೇಳಿ ಹೆದರಿಕೆ ಹುಟ್ಟಿಸುತಿದ್ದ ಪುಣ್ಯಾತ್ಮ . ನಮ್ಮುರಲ್ಲಿ ಜನರು ಮನಸ್ಸಿನಲ್ಲಿ ದೆವ್ವಗಳ ಬಗ್ಗೆ ಹೆದರಿಕೆ ಹುಟ್ಟಲು ಪ್ರಮುಖ ಕಾರಣ ಈ ಗೌಡರೆ.
ಇದೆಲ್ಲವನ್ನೂ ಅರಿತಿದ್ದ ದಿನು ಕಾಕಾ ಗೌಡರಿಗೆ ಚೆನ್ನಾಗಿ ಬುದ್ದಿ ಕಲಿಸಲು ಪಣ ತೊಟ್ಟಿದ್ದ. ಆದರು ನಮ್ಮಜ್ಜ ಬಯ್ಯುತ್ತಾರೆ ಎಂಬ ಹೆದರಿಕೆಗೆ ಸುಮ್ಮನಿದ್ದ. ಅದೊಂದು ದಿನ ಸಾಯಂಕಾಲದ ಸಮಯದಲ್ಲಿ ನಾನು ಮತ್ತು ದಿನು ಕಾಕಾ ಪಕ್ಕದ ಹಳ್ಳಿಗೆ ಹೋಗಬೆಕಾಯಿತು  .ಅದು ಪಕಿರಪ್ಪನವರ ಹಳ್ಳಿ. ಅಲ್ಲಿಗೆ ಹೋಗಲು ನಾವು ಈ ಸೋಮ್ಬಟನ ಕಟ್ಟೆಯ ಧಾರಿಯಲ್ಲೇ ಸಾಗಬೇಕಿತ್ತು. ಅಲ್ಲಿ  ಅಗತ್ಯ ವಸ್ತುಗಳನ್ನ ಕೊಂಡು ನಾವು ಮನೆಗೆ ವಾಪಾಸಾಗುತಿದ್ದೆವು. ಆಗಲೇ ಸುಮಾರು ಕತ್ತಲೆ ಆವರಿಸಿತ್ತು. ನಾವು ಆ ಕಟ್ಟೆಯ ಹತ್ತಿರ ತಲುಪುತಿದ್ದಂತೆ ಇದ್ದಕಿದ್ದಂತೆ ನಮಗೆ ಯಕ್ಷಗಾನದ ಹಾಡೊಂದು ಕೆಳತೊಡಗಿತ್ತು. ಆ ದ್ವನಿ ನಮ್ಮ ಗೌಡರದ್ದೆ ಎಂದು ತಿಳಿಯಲು ನಮಗೆ ಜಾಸ್ತಿ ಸಮಯ ಹಿಡಿಯಲಿಲ್ಲ. ಆ ಮಂದ ಬೆಳಕಿನಲ್ಲೂ ನಮ್ಮ ಗೌಡರು ಹೆದರಿಕೆಯಿಂದ ಜೋರಾಗಿ ಹಾಡಿಕೊಂಡು ಹೋಗುತಿದ್ದುದು ನಮಗೆ ಕಾಣಿಸುತಿತ್ತು. ನಾವಿಬ್ಬರು ಪಕ್ಕದೊಂದು ಪೊದೆಯ ಹಿಂದೆ ಅವಿತುಕೊಂಡೆವು. ಗೌಡರಿಗೆ ಬುದ್ದಿ ಕಲಿಸಲು ಪಣ ತೊಟ್ಟಿದ್ದ ದಿನುಕಾಕಾನ್ಗೆ ಒಳ್ಳೆ ಅವಕಾಶ ದೊರೆತಂತಾಗಿತ್ತು. ಇವತ್ತು ಇವಾನ್ಗೆ ಸರಿಯಾಗೇ ಬುದ್ದಿ ಕಲಸ್ತೆ ಅಂತ ಹೇಳುತ್ತಲ್ಲೇ ಪಕ್ಕದಲ್ಲೇ ಇದ್ದ ಚಿಕ್ಕ ಕಲ್ಲುಗಳನ್ನ ಬಾಚಿ ಆವರ ಮೇಲೆ ಎಸೆದು ಜೋರಾಗಿ ಕಿರುಚ ತೊಡಗಿದ. ಆಗಲೇ ಅರ್ದ ಹೆದರಿಕೆಯಿಂದ ಬೆಂಡಾಗಿದ್ದ ಗೌಡರು ಎದ್ದೆನೋ ಬಿದ್ದೆನೋ ಅಂತ ಜೋರಾಗಿ ಓಟಕಿತ್ತರು. ಅವರು ಓಡಿದ ವೇಗಕ್ಕೆ ನಿಮಿಷ ಮಾತ್ರ ದಲ್ಲೇ ಮನೆ ತಲುಪಿರಬಹುದೆಮ್ಬುದು ನಮ್ಮ ಅಂದಾಜು. ಮಾರನೆದಿನ  ಗೌಡರು ಕೆಲಸಕ್ಕೆ ಗೈರು. ಹೆದರಿ ಜ್ವರ ಬಂದು ಮಲಗಿದ್ದಾರೆ ಎಂಬ ಸುದ್ದಿ ನಮ್ಮನೆ ತಲುಪಿತ್ತು.. ಅದಾದ ಮೂರ್ನಾಲ್ಕು ದಿನಗಳಲ್ಲಿ ಕೆಲಸಕ್ಕೆ ಬಂದ  ಗೌಡರ ಕಥೆ ಮಾತ್ರ ಎಲ್ಲರನ್ನು ಬೆಚ್ಚಿ ಬಿಳಿಸಿತ್ತು. ತಮ್ಮ ಕಲ್ಪನೆಗೆ ಬಂದಂತೆ ಕಥೆಯ ಹೆಣೆದು. ವಿಕಾರವಾದ ಒಂದು ದೆವ್ವ ವನ್ನು ಅವರ ಕಥೆ ಯಾ ಮುಖ್ಯ ಪಾತ್ರದಾರಿಯಾಗಿಸಿ ನಮ್ಮ ಮನೆಯವರಿಗೆಲ್ಲ “ZEE HORROR SHOW” ಆನ್ ತೋರಿಸಿಬಿಟ್ಟರು. ಇದಾದ ಕೆಲವೇ ದಿನಗಳಲ್ಲಿ ಊರವರ ಬಾಯಲೆಲ್ಲ ಇದೆ ಕಥೆ.  ಏನೇ ಆದರು ಊರಿಲ್ಲಿ ಇನ್ನೊಂದು HORROR ಕಥೆಯನ್ನು  ಹುಟ್ಟುಹಾಕಿದ ಕೀರ್ತಿ ಮಾತ್ರ ನಮ್ಮದು :) ...
----------------------------------------------------------------------------------
ಮುರೂರಿನಿಂದ ಹೊನ್ನಾವರಕ್ಕೆ ಬಂದಾಗಲು ಸ್ವಲ್ಪದಿನ ಈ ನೆನಪುಗಳು ಕಾಡಿತ್ತಾದರು ಜೀವನ ಕಷ್ಟ ಅನ್ದನಿಸಿರಲಿಲ್ಲ.. ಮಲೆನಾಡ ಪರಿಸರದಿಂದ ಸಿದಾ ಕರಾವಳಿ ಕಡೆಗೆ ಬಂದ ನಾನಗೆ ನನ್ನ ಸುತ್ತಲಿನ ಪರಿಸರ ಎಲ್ಲವನ್ನು ಮರೆಸುವಂತೆ ಮಾಡಿತ್ತು.. ಕನ್ನಡ ಮಾದ್ಯಮ ಶಾಲೆಗೆ ಸೇರಿದ ಮೇಲೆ ನಾನು ಕೊಂಕಣಿ ಕಲಿತಿದ್ದು ಮಾತ್ರ ವಿಪರ್ಯಾಸ J. ಮನೆಯಲ್ಲಿ ಹೇಳದೆ ಹೋಗಿ ಶಂಖತಿರ್ಥದಲ್ಲಿ ಇಜಿದ್ದು. ಸಮುದ್ರದಲ್ಲಿ ಈಜಿ ಏನೋ ಸಾದಿಸಿದ ಸಂತೋಷದಲ್ಲಿರುವಾಗ ತಿಂದ ಅಪ್ಪನ ಎಟು. “ಅಬ್ಬ ಆ ಏಟು” J..ಆ ಮೇಲೆ ಸಿಕ್ಕ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲಾದಿತೆ.
           ಆದರು ಎಲ್ಲಾ ತಪ್ಪುಗಳು ಶುರುವಾಗಿದ್ದು ಇಲ್ಲಿನ್ದನೆ ಅಂತ ನನಗೆ ಆಗಾಗ ಅನ್ನಿಸಿದುಂಟು.. ಜೀವನಕ್ಕೆ ಗೊತ್ತು ಗುರಿಯೇ ಇಲ್ಲದ ನನಗೆ ಇಂಜಿನಿಯರ್ ಆಗಲೇ ಬೇಕೆಂಬ ದೊಡ್ಡ ಹೊರೆಯನ್ನ ಹೊರಿಸಿಬಿಟ್ಟರು. ಜೊತೆಯಲ್ಲಿ ಆಟವಾಡಬೇಕಿದ್ದ ಗೆಳೆಯರೆಲ್ಲ Competitors ಗಳಾಗಿ ಬಿಟ್ಟಿದ್ದರು. ಬೆಳಿಗ್ಗೆ ಸ್ಕೂಲ್ ಆದ್ರೆ ಸಂಜೆ ಟ್ಯುಷನ ಗೆ ಹೋಗ ಬೇಕಾದ ಅನಿವಾರ್ಯ ಕರ್ಮ. ೮೫% ಬಂದರು ಯಾರಿಗೂ ತ್ರಪ್ತಿಯಿಲ್ಲ. ಅಪ್ಪ ಸಿವಿಲ್ ಇಂಜಿನಿಯರ್ ಆಗು ಅಂದ್ರೆ ಉಳಿದವರು ಮೆಕ್ಯಾನಿಕಲ್ ಇಂಜಿನಿಯರ್ ಆಗು ಅನ್ನುತಿದ್ದರು. ಆದ್ರೆ ನಾನ್ ಹೇಗೆ ಸಾಫ್ಟ್ವೇರ್ ಇಂಜಿನಿಯರ್ ಆದೇನೋ !!! ಖಂಡಿತ ಗೊತ್ತಿಲ್ಲ....
----------------------------------------------------------------------------------
ನಮ್ಮೆಸ್ಟ್ರು 
            ನನ್ನ ಶಾಲಾ ದಿನಗಳಲ್ಲಿ ೨ ವಿಷಯಗಳು ನನಗೆ ಕಬ್ಬಿಣದ ಕಡಲೆ ಯಗಿದ್ದವು Mathametics & Drawing. Drawing ಕಷ್ಟನ ಅಂತ ಯೋಚಿಸ್ಥಿದ್ದಿರ. ನಿಜವಾಗಲು ಕಷ್ಟ ಸ್ವಾಮಿ .... ನಾನು ಬಿಡಿಸುತಿದ್ದ ಚಿತ್ರಗಳನ್ನ ನೋಡಿ ನಮ್ಮ ಮೇಸ್ಟ್ರು ಪ್ರತಿ ಕ್ಲಾಸ್ಸಲ್ಲು ನನ್ನ ಎತ್ತಿ ಹೊರಗೆ ಬಿಸಾಡುತಿದ್ದರು. ತಿಂದ ಪೆಟ್ಟುಗಳಿಗೆ ಲೆಕ್ಕವೇ ಇಲ್ಲ . Drawing ಕ್ಲಾಸ್ ಅಂದ್ರೇ ಬರಿ ಅವಮಾನ. ಯಾಕೋ ಗೊತ್ತಿಲ್ಲ ಮೇಸ್ಟ್ರು ಕೊಡುತ್ತಿದ್ದ ಹಿಮ್ಸೇಗೋ ಅತವ ಎಲ್ಲರಿಗು ನಾನೆನೆಮ್ಬುದ ತೋರಿಸಲೇ ಬೇಕು ಎಂಬ ಮೊಂಡು ಹಠದಿಂದನೋ ನಾನು ಡ್ರಾಯಿಂಗ್ ಕಲಿಯಲೆ ಬೇಕೆಂಬ ಹಟಕ್ಕೆ ಬಿದ್ದು ಬಿಟ್ಟೆ. ಸುಮಾರು ಒಂದು ವರ್ಷ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟೆ.  ಸರಿಯಾಗಿ ಮಾತನಾಡಲು ಬಾರದ ಕಿವಿಯು ಕೇಳದ ವೆಂಕಟೇಶ್ ಪೈ ಅವರು ನನ್ನ ಗುರುವಾದರು.. ನನ್ನ ಕೈ ಹಿಡಿದು ತಿದ್ದು ತಿದ್ದ ಅವರು ಮಾಡಿದ್ದೂ ಮಾತ್ರ ಚಮತ್ಕಾರ. LKG ಮಕ್ಕಳಿಗೂ compitation ಕಡಲಾಗದ ನಾನು ಸೀನಿಯರ್ ಲೆವೆಲ್ Drawing exam ಅಲ್ಲಿ distinction ನಲ್ಲಿ ಪಾಸಾಗಿದ್ದೆ .  ಚಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ನನಗೆ ತಿಳಿಸಿ ಕೊಟ್ಟ ವೆಂಕಟೇಶ್ ಪೈ ಅವರೀಗೆ HATS OFF. 
----------------------------------------------------------------------------------
           ಇದಾದ ನಂತರ ಶುರುವಾಗಿದ್ದು ನಮ್ಮ ಅಮ್ಮನ ಹಠ.. ನಾನು Flutist ಆಗಬೇಕೆಂಬುದು ಅವರ ಹಂಬಲ. ಜಾತ್ರೆಯಲ್ಲಿ ಸಿಗುವ ಪಿಪಿ ಯನ್ನೇ ಸರಿಯಾಗೆ ಉದಲು ಬಾರದ ನಾನು ಕೊಳಲು ಕಲಿಯೋದು ಹೇಗೆ ? ಎಂಬುದು ನಮಪ್ಪನ ಪ್ರಶ್ನೆ.. ಹಲವಾರು ದಿನಗಳ ವಕ್ಸಮರದ ನಂತರ ಕೊನೆಗೊಂದು ದಿನ ನಿರ್ಧಾರ ವಾಗಿಯೇ ಬಿಟ್ಟಿತ್ತು. ನನ್ನಷ್ಟೇ ಉದ್ದದ ಕೊಳಲನ್ನ ತಂದು  ನನ್ನ ಕೈಯಲ್ಲಿ ಇಟ್ಟೆ ಬಿಟ್ಟರು..
                                     
ಇಲ್ಲಿ ನನ್ನ ಗುರುವಾದವರು ಸುಬ್ರಾಯ ಭಂಡಾರಿಯವರು.. ಎಲ್ಲರನ್ನು ಮಂತ್ರ ಮುಗ್ದವಾಗಿಸುತಿದ್ದ ಅವರ ಕೊಳಲು ನನ್ನನ್ನು ಅದರ  ವಶಕ್ಕೆ ತೆಗೆದುಕೊಂಡು ಬಿಟ್ಟಿತು. ೩ ವರ್ಷ ಅವರಿಂದ ಹಿಂದುಸ್ತಾನಿ ಶೈಲಿಯಲ್ಲಿ ಕೊಳಲನ್ನು ಕಲಿತೆ.ಎಸ್ಟೆ ಕಲಿತರು ಅವರ ಸರಿಸಮಾನವಾಗಿ ಬಾರಿಸೋದು ಅಸಾದ್ಯ ಎನಿಸಿತು. ಆಸ್ಟೋ ಇಸ್ಟೊ ಕಲಿತರು ಇಂದಿಗೂ ಮನಸಿಗೆ ಬೇಸರವಾದಾಗ ನಾನು ಆಶ್ರಯಿಸೊದು ಸಂಗೀತವನ್ನೇ..

  
    

     ನೆನಪೆಂಬ ಸಾಗರದಲ್ಲಿ  ಹುಡುಕಿದಾಗ ಸಿಕ್ಕಿದ ಮುತ್ತುಗಲಿಸ್ಟು. ಸಿಗದವು ಇನ್ನೆಸ್ಟೋ ....  ಈಗ ಸಿಗದವು ಗಳನ್ನೂ ಮುಂದೆ ಹೆಕ್ಕಿ ತರುವ ಪ್ರಯತ್ನವನ್ತು ಖಂಡಿತ  ಮಾಡುತ್ತೇನೆ...  ಧನ್ಯವಾದಗಳು........... 

2 comments:

  1. Good one gourish.. Keep on writing such good real stories.. love to read ur blog.. :)

    ReplyDelete