Friday, October 7, 2011

ಹೊನ್ನಾವರ



                  ಹೊನ್ನಾವರ ಇದು ಉತ್ತರ ಕನ್ನಡ ಜಿಲ್ಲೆಯ ಒಂದು ಸುಂದರ ಬಂದರು ಪ್ರದೇಶ. ಹೊನ್ನಾವರ ಪಟ್ಟಣವು ತಾಲೂಕಿನ ಕೇಂದ್ರ. ಅರಬ್ಬಿ ಸಮುದ್ರದ ತೀರದಲ್ಲಿ ಶರಾವತಿ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ಪಟ್ಟಣ ಐತಿಹಾಸಿಕ ಪ್ರದೇಶ. ಐತಿಹಾಸಿಕವಾಗಿ ಗಮನಿಸಲು ಹೋದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸ ಪುಟಗಳಲ್ಲಿ ಸಿಗುತ್ತವೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ಯಕ್ಷಗಾನ ಕಲೆ ಹಾಗೂ ತಾಳಮದ್ದಲೆ ಕಾರ್ಯಕ್ರಮ ಇಲ್ಲಿಯ ವೈಶಿಷ್ಟ್ಯ.



  ಇತಿಹಾಸ
                          ಹೊನ್ನಾವರ ಪಟ್ಟಣದ ಬಗ್ಗೆ ಮೊದಲ ಐತಿಹಾಸಿಕ ಉಲ್ಲೇಖ ಗ್ರೀಕ್ ಲೇಖಕ ಪೆರಿಪ್ಲುಸ್ (ಕ್ರಿ.ಶ. 247) ಕೃತಿಗಳಲ್ಲಿ ಕಾಣಿಸಿಕೊಳ್ಳುತ್ತದೆ . ಇದನ್ನು  ತಮಿಳು ದೇಶದಲ್ಲಿ "ಲಿಮುರಿಕೆ " ಮೊದಲ ಬಂದರು ಎಂದು ಉಲ್ಲೇಖಿಸಲಾಗಿದೆ.
                                 10 ನೇ ಶತಮಾನದ ಪಠ್ಯ ಜೈನ ರಾಮಾಯಣ ದಲ್ಲಿ ಪಟ್ಟಣವನ್ನು ಹನುರುಹ ದ್ವೀಪ ಎಂದು ತಿಳಿಸಲಾಗಿದೆ. ಈ ಪಟ್ಟಣದ ಬಗ್ಗೆ ಉಲ್ಲೇಖಗಳು ಅಬು ಅಲ್-ಫಿದ  (AD1273-1331), ಎಂಬ  ಅರಬ್ ಜಿಯೋಗ್ರಾಫರ್ ತನ್ನ ಕ್ರತಿಗಳಲ್ಲಿ ಹಿನುರು ಎಂದು ವಿವರಿಸಿದ್ದಾನೆ .
                          ಹೊನ್ನಾವರ ಅಥವಾ ಒನೊರ್, ಉತ್ತರಾ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ, ಬ್ರಿಟಿಷ್ ಭಾರತದ ಪ್ರಮುಖ ಬಂದರು ಆಗಿತ್ತು. ಇದು 16 ನೇ ಶತಮಾನದ ಹಿಂದೆಯೇ ವ್ಯಾಪಾರದ ಪ್ರಮುಕ  ಸ್ಥಳ ಎಂದು ಹೇಳಲಾಗಿದೆ, 
                             ಹೊನ್ನಾವರದ ಪೂರ್ವದ ಹೆಸರು ಹೊನ್ನಾಪುರ ಅಥವಾ ಸುವರ್ಣಪುರ ಎಂದಾಗಿತ್ತು. ಇದು ಚಿನ್ನ ಹಾಗು ಇತರ ಬೆಲೆಬಾಳುವ ವಸ್ತುಗಳ ಪ್ರಮುಖ ಮಾರುಕಟ್ಟೆಯಾಗಿತ್ತು. ಇದರಿಂದಲೇ ಈ ಊರಿಗೆ ಹೊನ್ನಾವರ ಎಂಬ ಹೆಸರು ಬಂದಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಹೊನ್ನಾವರ, ಒಮ್ಮೆ ರಾಣಿ ಚೆನ್ನಭೈರದೇವಿ ಆಡಳಿತದ ಅಡಿಯಲ್ಲಿತ್ತು. ಈಕೆ ಈ  ಪ್ರಾಂತ್ಯದ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ದವಾಗಿದ್ದಳು.ಈಕೆ ಗೆರೋಸೋಪ್ಪ ಬಂದರಿನಿಂದ ಕಾಳುಮೆಣಸನ್ನು ಯುರೋಪ್ ಮತ್ತು ಜಗತ್ತಿನ ಇತರ ದೇಶಗಳಿಗೆ ರಪ್ತು ಮಾಡುತಿದ್ದಳು. ಬ್ರಿಟಿಷರಿಂದ ಸೋಲಿಸಲ್ಪಟ್ಟ ನಂತರ ತಾನು ತನ್ನ ಅಪಾರ ಸಂಪತ್ತನೊಂದಿಗೆ ಜಲ ಸಮಾಧಿಯದಳು ಎಂಬುವುದು ಇತಿಹಾಸ. ಇಂದಿಗೂ ಈಕೆಗೆ ಸಂಬಂದಿಸಿದ ಬೆಲೆಬಾಳುವ ಸಂಪತ್ತು ಗೆರಸೋಪ್ಪ ಕಾಡಿನಲ್ಲಿ ಇದೆ ಎಂಬುದು ಇಲ್ಲಿಯ ಜನರ ಅಭಿಪ್ರಾಯ.

ಶರಾವತಿ ಕಣಿವೆ

ಪ್ರೇಕ್ಷಣಿಯ ಸ್ತಳಗಳು
                      ಶರಾವತಿ  ಹೊನ್ನಾವರದ ಮುಖ್ಯ ಆಕರ್ಷಣೆಗಳಲ್ಲಿ  ಒಂದು. ಈ ನದಿ ಹೊನ್ನಾವರದಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಸಮುದ್ರ ಸೇರುವ ಸಂದರ್ಭದಲ್ಲಿ, ನದಿ ಕೆಲವು ದ್ವೀಪಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಮಾವಿನ್ಕುರ್ವ ಅತ್ಯಂತ ದೊಡ್ಡ ಹಾಗು ಸುಂದರವಾದ ದ್ವೀಪ ವಾಗಿದೆ .
ಕರ್ನಲ್ ಹಿಲ್
                  ಕರ್ನಲ್ ಹಿಲ್ ಹೊನ್ನಾವರದ ಇನ್ನೊಂದು ಆಕರ್ಷಣಿಯ ಸ್ಥಳ. ಇದು NH-17 ಪಾರ್ಶ್ವದಲ್ಲಿ ಒಂದು ದಿಣ್ಣೆ ಮೇಲೆ ಸ್ಥಾಪಿತವಾಗಿದೆ 30 ಮೀಟರ್ ಎತ್ತರದ ಅಂಕಣ ಇದೆ. ಈ ಕಾಲಮ್ 20 ಜನವರಿ 1845 ರಂದು ಕರ್ನಲ್ ಹಿಲ್ ನೆನಪಿಗಾಗಿ ಸ್ಥಾಪಿಸಿದರು. ಇದು ಮೈಸೂರು ವಿಭಾಗ ಕಮಾಂಡಿಂಗ್  ಕರ್ನಲ್ ಹಿಲ್ ಗೌರವಾರ್ಥ ಪೂರ್ವ ಭಾರತ ಕಂಪನಿಯ ಉದಾಹರಣೆಗೆ  14 ನೇ ಮದ್ರಾಸ್ ಸ್ಥಳೀಯ ಪದಾತಿದಳದ ಮೂಲಕ ಸ್ಥಾಪಿಸಲಾಯಿತು.
                        ರಾಮತೀರ್ಥ ಹೊನ್ನಾವರದ  ಮತ್ತೊಂದು ಸುಂದರ ಸ್ಥಳವಾಗಿದೆ. ಸುಮಾರು 3 ಕಿಮಿ  ದೂರದಲ್ಲಿ ಹೊನ್ನಾವರ-ಚಂದವರ್  ರಸ್ತೆಯಲ್ಲಿ  ಇದೆ. ನೆಲದ ಕೆಳಗಿನ ಮಟ್ಟದಲ್ಲಿ 50 ಹಂತಗಳ ಆಳದಲ್ಲಿ ಈ  ಪುಷ್ಕರಿಣಿ ಈದೆ . ಇಲ್ಲಿ ರಾಮತೀರ್ಥ ಮತ್ತು ಲಕ್ಷ್ಮಣ್ ತೀರ್ಥ ಎಂಬ ಎರಡು ಜಲದಾರೆಗಳು ಈ ಪುಸ್ಕರಣಿಯಲ್ಲಿ ಬಿಳುತ್ತವೆ . ಸ್ಥಳೀಯ ಸಂಪ್ರದಾಯಗಳ ಪ್ರಕಾರ, ಶ್ರೀ ರಾಮ, ಸೀತಾ ಮತ್ತು ಲಕ್ಷ್ಮಣ್ ತಮ್ಮ ವನವಾಸ  ಸಮಯದಲ್ಲಿ ಇದನ್ನು ನಿರ್ಮಿಸಿದರು ಎಂಬ ಪ್ರತೀತಿ ಇದೆ.
ಕಾಸರ್ಕೋಡು  ಬೀಚ್
                         ಕಾಸರ್ಕೋಡು  ಬೀಚ್ ಹೊನ್ನಾವರದ ಪ್ರವಾಸಿ ಆಕರ್ಷಣೆಯಾಗಿದೆ. ಇದು ಹೊನ್ನಾವರದಿಂದ 2 ಕಿಮೀ ದೂರದಲ್ಲಿದೆ. ಈ ಸುಂದರ ಮರಳು ಬೀಚ್ ಸುಮಾರು 5 ಕಿಮೀ ಉದ್ದ ಇದೆ. ಚಿನ್ನದ ಬಣ್ಣದ ಮರಳು, ಸುಂದರ ಅಲೆಗಳು, ಸೂರ್ಯಾಸ್ತಮಾನ ದಿನನಿತ್ಯ ಸಾವಿರಾರು ಪ್ರವಾಸಿಗರಿಗೆ ಮುದ ನೀಡುತ್ತವೆ.
                                                                      ಬಸವರಾಜದುರ್ಗ            
                 
ಬಸವರಾಜ  ದುರ್ಗಾ ಅರೇಬಿಯನ್ ಸಮುದ್ರದ ಒಂದು ದ್ವೀಪವಾಗಿದೆ. ಇದು ದೂರ ಶರಾವತಿ  ಸಮುದ್ರ ಸೇರುವ ಸ್ಥಳದಿಂದ ಸುಮಾರು  3 ಕಿಮೀ ದೂರದಲ್ಲಿದೆ. ನಾವು ದೋಣಿ ಅಥವಾ ಪರ್ಷಿಯನ್ ಬೋಟ್ ಮೂಲಕ  ಅದನ್ನು ತಲುಪಲು ಸಾಧ್ಯ. ಈ ದ್ವೀಪ ಸುಮಾರು  19 ಹೆಕ್ಟೇರ್ ಒಟ್ಟು ವಿಸ್ತೀರ್ಣ ಹೊಂದಿದೆ. ಇಲ್ಲಿನ ಕೋಟೆ ವಿಜಯನಗರ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿತ್ತು. 1690 ರಲ್ಲಿ, ಕೆಳದಿ  ದೊರೆ ಶಿವಪ್ಪ  ನಾಯಕ ಅದನ್ನು ವಶಪಡಿಸಿಕೊಂಡಿದ್ದ  ಮತ್ತು ಕೆಳದಿ  ದೊರೆ  ಬಸವರಾಜನ  ನೆನಪಿಗಾಗಿ ಬಸವರಾಜದುರ್ಗ ಎಂಬ  ಹೆಸರಿಡಲಾಯಿತು.
ಅಪ್ಸರಕೊಂಡ  ಜಲಪಾತ
ಅಪ್ಸರಕೊಂಡ  ದ್ರಶ್ಯ ವೈಭವ
ಸೂರ್ಯಾಸ್ತಮಾನ
                   ಅಪ್ಸರಕೊಂಡ  ಸಣ್ಣ ಆಕರ್ಷಕ ಜಲಪಾತವಾಗಿದ್ದು  ಹೊನ್ನಾವರದಿಂದ ಸುಮಾರು  5 ಕಿಮೀ ದೂರದಲ್ಲಿದೆ. ಅಪ್ಸರಕೊಂ  ಇದು  ಅಪ್ಸರಾ ಅಥವಾ ಅಪ್ಸರೆ  ಕೊಳದ ಅರ್ಥ. ಇಲ್ಲಿ 10 ಮೀಟರ್ ಎತ್ತರದಿಂದ ಬೀಳುವ ನೀರು ಸಣ್ಣ ಜಲಪಾತದ ರೂಪುತಳೆದಿದೆ  . ಉನ್ನತ ಪರ್ವತ, ದೊಡ್ಡ ನೈಸರ್ಗಿಕ ಗುಹೆ, ಸಮುದ್ರ ಮತ್ತು ಸೂರ್ಯಾಸ್ತಮಾನ ಇಲ್ಲಿಯ ಇತರೆ ಪ್ರಮುಖ ಆಕರ್ಷಣೆಗಳಾಗಿವೆ.
           ಕರ್ನಾಟಕದ ಪ್ರಮುಖ ಯಾತ್ರ ಸ್ತಳಗಳಲ್ಲಿ ಇಡಗುಂಜಿ ಕೂಡಾ  ಒಂದು. ಇಲ್ಲಿ ನೆಲಸಿರುವ ಮಹಾ ಗಣಪತಿ ಭಾಗದ ಜನರ ಇಷ್ಟ ದೇವತೆ ಯಾಗಿದ್ದಾನೆ. ಇಡಗುಂಜಿ ಹೊನ್ನಾವರ ದಿಂದ ಸುಮಾರು ೧೮ ಕಿಮಿ ದೂರದಲ್ಲಿದೆ.

 ಮಹಾ ಗಣಪತಿ
                                                   ಇಡಗುಂಜಿ ದೇವಸ್ಥಾನ

                                ಗುಂಡಬಾಳಾ , ಮಧ್ಯಯುಗದ ವ್ಯಾಪಾರ ಕೇಂದ್ರವಾಗಿತ್ತು. ಇದು ಗೆರ್ಸೋಪ್ಪ  ದೊರೆಗಳ ಕಾಲದಲ್ಲಿ ರಪ್ತು ಮೆಣಸು ಸಂಗ್ರಹಿಸುವ  ಕೇಂದ್ರವಾಗಿತ್ತು.ಇಲ್ಲಿ ಇಂದಿಗೂ ಕಾಳುಮೆಣಸು ಶೇಕರಿಸಿತಿದ್ದ ಹೊಂಡಗಳಿವೆ. ಇಂದು ಗುಂಡಬಾಳಾ  ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಹಳ್ಳಿಯಲ್ಲಿ ಒಂದು ಹನುಮಾನ್ ದೇವಾಲಯವಿದೆ. ಇಲ್ಲಿ ಭಗವಾನ್ ಹನುಮಂತನು ಯಕ್ಷಗಾನ ಪ್ರಿಯನಾಗಿದ್ದು. 100 ಕ್ಕೂ ಹೆಚ್ಚು  ಯಕ್ಷಗಾನ  ಪ್ರದರ್ಶನ ಇಲ್ಲಿ  ಪ್ರತಿ ವರ್ಷ ನಡೆಯುತ್ತದೆ. ಇದು ಇಡೀ ರಾತ್ರಿ ಪ್ರದರ್ಶನವಾಗಿದೆ.
                                  ಹಿಂದಿನ  ರಾಜಧಾನಿ ಗೆರ್ಸೋಪ್ಪ  ಹೊನ್ನಾವರ ರಿಂದ 24 ಕಿಮೀ ದೂರದಲ್ಲಿದೆ. ಇದು ಶ್ರೀಮಂತ ಪ್ರಾಚೀನವಾದ  ಒಂದು ಸ್ಥಳ. ಸಾಳುವ ಆಡಳಿತಗಾರರು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ ಜೈನ  ಚತುರ್ಮುಖ ಬಸ್ತಿ, ಇಲ್ಲಿ ಅತ್ಯಂತ ಪ್ರಸಿದ್ಧ ಸ್ಮಾರಕ. ಇದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರವೇಶಗಳನ್ನು ಹೊಂದಿದೆ. ನಾಲ್ಕು ಪ್ರತ್ಯೇಕ ತೀರ್ಥಂಕರ ಚಿತ್ರಗಳು ನಾಲ್ಕು ಪ್ರವೇಶಗಳನ್ನು ಎದುರಿಸುತ್ತಿರುವಂತೆ ಇವೆ. 
ಜನಜೀವನ 
                             ಹೊನ್ನಾವರ  ಟೈಲ್-ತಯಾರಿಕಾ ಘಟಕಗಳು ಮತ್ತು ಗೋಡಂಬಿ ಕಾರ್ಖಾನೆಗಳಿಗೆ  ಹೆಸರುವಾಸಿಯಾಗಿದೆ. ಕೃಷಿ ಮತ್ತು ಮೀನುಗಾರಿಕೆ ಹೊನ್ನಾವರ ಜನರ ಮುಖ್ಯ ಉದ್ಯೋಗಗಳು . ಶರಾವತಿ  ನದಿ ನೀರಾವರಿ ಮತ್ತು ಸಂಚರಣೆ ಸೌಲಭ್ಯಗಳನ್ನು ಒದಗಿಸುತ್ತದೆ . ಹೊನ್ನಾವರ ತಾಲ್ಲೂಕಿನ ಎರಡು ಶಾಸಕಾಂಗ ಕ್ಷೇತ್ರಗಳಾಗಿ ಹಂಚಿಕೆಯಾಗಿದೆ. ಇದು ಒಂದು ಭಾಗವು ಭಟ್ಕಳ್ ಶಾಸಕಾಂಗ ಕ್ಷೇತ್ರದ್ದಗಿದ್ದು  ಇನ್ನೊಂದು  ಕುಮಟಾ  ಶಾಸಕಾಂಗ ಕ್ಷೇತ್ರಕ್ಕೆ ಸೇರಿದೆ.
                           ಹೊನ್ನಾವರ ತನ್ನ ಲೇಡಿ ಮೀನಿಗೆ  (ಕೊಂಕಣಿ ಯಲ್ಲಿ ನಗಲಿ ) ಬಹಳ ಜನಪ್ರಿಯ. ಹೊನ್ನಾವರದಲ್ಲಿ ಸಿಗುವ ಲೇಡಿ ಮೀನು ಪ್ರಪಂಚದಲ್ಲೇ ಅತ್ಯಂತ ಉತ್ತಮವಾದದ್ದು ಎಂಬುದು ಇಲ್ಲಿಯವರ ಮಾತು.
ಸಾರಿಗೆ ವ್ಯವಸ್ಥೆ
                            ದಕ್ಷಿಣದಲ್ಲಿ ಮಂಗಳೂರು ಮತ್ತು ಉತ್ತರದಲ್ಲಿ ಪಣಜಿಯಂತಹ ಶಹರಗಳನ್ನು ಜೋಡಿಸುವ ರಾಷ್ಟ್ರಿಯ ಹೆದ್ದಾರಿ ಸಂಖ್ಹ್ಯೆ ೧೭ ಹಾದು ಹೋಗುವ ಈ ಪ್ರದೇಶ ಈ ಎರಡು ಸ್ಥಳಗಳಿಂದ ಸಮ ದೂರದಲ್ಲಿದೆ. ಹೊನ್ನಾವರ - ತುಮಕೂರು ರಾ. ಹೆದ್ದಾರಿ ಸಂಖ್ಯೆ ೨೦೬, ರಾಜ್ಯದ ರಾಜಧಾನಿಯನ್ನು ಜೋಡಿಸುತ್ತದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಖ್ಯ ಸಾರಿಗೆಯಾಗಿದ್ದರೂ, ಕೊಂಕಣ ರೇಲ್ವೆ ಸಹ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ. ಜನರು ಖಾಸಗಿ ಸಾರಿಗೆ ವ್ಯವಸ್ಥೆಯನ್ನ ಹೆಚ್ಚಾಗಿ ಅವಲಂಬಿಸಿದ್ದಾರೆ.
  



ಹೊನ್ನಾವರ  ಬೀಚ್

   ಹತ್ತಿರದ ರೈಲು ನಿಲ್ದಾಣ : ಹೊನ್ನಾವರ ರೈಲು ನಿಲ್ದಾಣ (ಹೊನ್ನಾವರದ ಹೊರಭಾಗದ ಕರ್ಕಿಯಲ್ಲಿದೆ.ಹೊನ್ನಾವರದಿಂದ ಸುಮಾರು ೫ ಕೀ.ಮೀ. ದೊರದಲ್ಲಿದೆ)
                     
ಹತ್ತಿರದ ವಿಮಾನ ನಿಲ್ದಾಣ: ಬಜ್ಪೆ ಅಂತರ್ರಾಷ್ಟ್ರಿಯ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ.(ಸುಮಾರು ೧೯೫ ಕೀ.ಮೀ ದೊರದಲ್ಲಿದೆ)
                         ಸಹ್ಯಾದ್ರಿ  ತಪ್ಪಲಿನಲ್ಲಿ, ವಿಶಾಲ ಕಡಲ ತಡಿಯಲ್ಲಿ ಹಸಿರು ಹೊದ್ದು ನಿಂತಿರುವ ನಮ್ಮ ಹೊನ್ನಾವರ ಪ್ರಕ್ರತಿ ಪ್ರಿಯರ ಮೆಚ್ಚಿನ ತಾಣ.  ಹಲವಾರು ಜಾತಿ,ಧರ್ಮ,ಬಾಷೆ,ಕಲೆ ಮತ್ತು ಸಂಸ್ಕ್ರತಿಗಳ ತವರು ನನ್ನೂರು. ಇಲ್ಲಿನ ಪ್ರಕ್ರತಿ ಎಷ್ಟು ಸುಂದರ ವಾಗಿದೆಯೋ ಇಲ್ಲಿಯ ಜನರ ಹೃದಯವು ಅಸ್ಟೇ ವಿಶಾಲ, ಅಸ್ಟೆ ಸುಂದರ.

                     ವಂದನೆಗಳೊಂದಿಗೆ……..                                                                                                                                                                                                   
                      ಗಜಾನನ ನಾಯಕ್