' ಚಿನ್ಮಯಿ', ಈ ಬರಹಕ್ಕೆ ಈ ಹೆಸರನ್ನು ಏಕೆ ಕೊಟ್ಟೆನೋ ಗೊತ್ತಿಲ್ಲ. ಅದೆಲ್ಲ ಇರಲಿ ವಿಷಯಕ್ಕೆ ಬಂದು ಬಿಡೋಣ ... ಮೊನ್ನೆ ಇದ್ದಕಿದ್ದಂತೆ ಮನಸಲ್ಲಿ ಸುನಾಮಿ ಎಬ್ಬಿಸಿ ಹೋಗಿದ್ದ ಹುಡುಗಿ, ನೀನು ನನಗೆ ಇಷ್ಟ ಅಂದು ಬಿಡೋದಾ .ಅಬ್ಬ ಸ್ವರ್ಗಾನೆ ಕೈಗೆ ಸಿಕ್ಕಷ್ಟು ಸಂತೋಷ.ಆ ಸಂತೋಷದಲ್ಲಿ ನನಗೆ heart attack ಆಗದೆ ಬದುಕಿದ್ದೆ ಹೆಚ್ಚು.
ಏನೇನೋ ಹೇಳಬೇಕೆನ್ನೋ ಆತುರ. ಆದರೆ ಶಬ್ದಗಳೇ ಹೊರ ಬರುತ್ತಿಲ್ಲ.ಎದೆಯಲ್ಲಿ ಏನೋ ತಳಮಳ. ಸಾಲದಕ್ಕೆ ಮುಂಗಾರು ಮಳೆ stylalli rain effect ಬೇರೆ. ಅರ್ಜೆಂಟ್ ಆಗಿ ಒಂದು DUET ಸಾಂಗ್ ಹಾಡಬೇಕು ಅನ್ನಿಸ್ತು ಆದ್ರೆ ಯಾಕೋ ವಾಯ್ಸ್ ಬರ್ಥಿರಲೀಲ್ಲ. ಬರಿ ಕೆಲಸ ಓದು ಇವುಗಳಿಂದ ಬ್ಲಾಕ್ ಎಂಡ್ ವೈಟ್ ಸಿನಿಮಾದಂತಿದ್ದ ನನ್ನ ಲೈಫ್ ಕಲರ್ ಫುಲ್ ಆಗಿಬೀಟ್ಟಿತ್ತು . ಮನದ ಮರಭೂಮಿಯಲ್ಲಿ ಓಯಾಸಿಸ್ ಸಿಕ್ಕ ಅನುಬವ.
ಅವಳ ಕಣ್ಣಲ್ಲಿ ಕಣ್ಣಿಟ್ಟು ಅದರಲ್ಲಿ ನನ್ನ ಬಿಂಬ ನೋಡೋ ಆಸೆ, ಅವಳ ಮೊದಲ ಸ್ಪರ್ಶದ ರೋಮಾಂಚನವನ್ನ ಬುತ್ತಿಕಟ್ಟಿ ಇಡುವಾಸೆ . ಆ ಕ್ಷಣ ವನ್ನ ಫ್ರೇಂ ಹಾಕಿ ಜೀವನದ ಗೋಡೆಮೇಲೆ ಸಂಬಾಳಿಸಿ ಇಡುವಾಸೆ. ಪ್ರೀತಿಯ ನೀರಿಲ್ಲದೆ ಒಣಗಿ ಹೋದ ಕನಸುಗಳು ಮತ್ತೆ ಚಿಗುರಿದ್ದವು. ಕಾಡುತಿದ್ದ ಅದೆಷ್ಟೋ ನೋವುಗಳು , ಕಣ್ಣಿರು ಕ್ಷಣಕಾಲದಲ್ಲೇ ಮರೆತು ಹೋಯಿತು." ನೀನಂದ್ರೆ ವಿಪರಿತ ಎನ್ನುವಸ್ಟು ಇಷ್ಟ ಕಣೆ, ನೀನಿಲ್ದೆ ಬದುಕೊಕಾಗಲ್ಲ .. ನಿನ್ನ ಮಡಿಲಲ್ಲೇ ಪ್ರಾಣ ಬಿಡೋ ಆಸೆ " ಅಂತ ಏನೇನೋ dilogue ಗಳು ತುಟಿಯಂಚಲ್ಲಿ ಬಂದು ತಮ್ಮ ಸರದಿಗಾಗಿ ಕಾಯುತಿದ್ದರು ಯಾಕೋ ಹೇಳೋಕಾಗಲೇ ಇಲ್ಲ.
ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿದ್ದೆ . ಅವಳ ಕಣ್ಣಂಚಲ್ಲಿ ಕಂಡ ಆ ಹನಿ ಕಣ್ಣಿರು ಮುತ್ತಾಗಿ ನನ್ನ ಮನ ತುಂಬಿತ್ತು. ನನ್ನ ಮನದ ಬಾವನೆಗಳೆಲ್ಲ ಕಣ್ಣಿರಾಗಿ ಹರಿದವು. ಇಷ್ಟು ದಿನ ಯಾಕೆ ನನ್ನ ಹೀಗೆ ಕಾಡಿಸಿದೆ? ಎಂದು ಬೈದು ಅವಳಿಲ್ಲದೆ ನಾ ಪಟ್ಟ ವ್ಯಥೆ ,ಹಿಂಸೆ, ನೋವು ಗಳ ಗಂಟನ್ನು ಅವಳ ಮುಂದೆ ಬಿಚ್ಚಿಡಬೇಕು ಎಂದನಿಸಿತು. ಆದರು ಆ ಸಮಯದಲ್ಲಿ ಅದೆಲ್ಲ ಯಾಕೆ!ಎಲ್ಲವು ಸುಕಾಂತ್ಯ ವಯಿತಲ್ಲ ಎಂಬ ನೆಮ್ಮದಿಯ ನಿಟ್ಟುಸಿರ ಬಿಟ್ಟೆ.
ಮಳೆ ನಿಂತಿತ್ತು. ಬರಿ ನೈದಿಲೆ ಗಳೇ ತುಂಬಿದ್ದ ಸರೋವರದ ಪಕ್ಕದಲ್ಲಿ ಜೋಡಿ ಹಕ್ಕಿಗಳ ಹಾಗೆ ಕೂತಿದ್ದೆವು. ಇದ್ದಕಿದ್ದಂತೆ ತನ್ನ ತಲೆ ಯನ್ನೂ ನನ್ನ ಹೆಗಲಮೇಲೆ ಇರಿಸಿ ಮಾತಿಗೆ ಇಳಿದಳು ನನ್ನವಳು. "ನೀನಂದ್ರೆ ನಂಗೆ ಪ್ರಾಣ ಕಣೋ , ನನ್ನ ಕೊನೆ ಉಸಿರಿರೋವರೆಗೂ ನಿನ್ನೋಡನೆಇರುವಾಸೆ ". ಅಂತ ಏನೇನೋ ಹೇಳ ತೊಡಗಿದಳು. ಅವಳಾಡಿದ ಪ್ರತಿ ಮಾತು ನನ್ನಲ್ಲಿ ನೂರಾರು ಆಸೆ ಗಳನ್ನ ಹುಟ್ಟು ಹಾಕುತಿದ್ದವು. ಮೊದಲ ಬಾರಿಗೆ ಜೀವನದಲ್ಲಿ ಸಂತೋಷದ ಅರ್ಥ ತಿಳಿಯಿತು. ಇದೆಲ್ಲರದ ಮದ್ಯೆ ಏನೇನೋ ಯೋಚನೆಗಳು ಮನದ ಪರದೆ ಮೇಲೆ ಹರಿದಾಡ ತೊಡಗಿದ್ದವು. ಪ್ರೀತಿ ಮಾಡಿ ಅದು ಸಿಗದಿದ್ದಾಗ ದಿನ ಎಣ್ಣೆ ಹೊಡೆದು ಪೆತ್ಹೋ ಸಾಂಗ್ ಹಾಡೋ ಎಲ್ಲ ಫ್ರೆಂಡ್ಸ್ ಗು ನನ್ನ ಸಕ್ಸೆಸ್ಸ್ ಸ್ಟೋರಿ ಹೇಳಿ ಹೊಟ್ಟೆಕಿಚ್ಚು ಬರಿಸಬೇಕು ಅನ್ನಿಸ್ತಿತ್ತು. ಮನಸಲ್ಲೇ ಒ೦ದು ಸಲ ಸಣ್ಣಗೆ ನಕ್ಕು ನನ್ನ ಲವ್ ಸ್ಟೋರಿ ಗೆ ವಾಪಸಾದೆ.
"ಇಷ್ಟು ದಿನ ಯಾಕೆ ನನ್ನ ಹೀಗೆ ಕಾಡಿದೇ ? ನಿನ್ನ ನಾನು ಎಷ್ಟು ಇಷ್ಟ ಪಡುತಿದ್ದೆ ಅಂತ ನಿನಗೆ ಗೊತ್ತಿತ್ತಲ್ಲ!" ಎಂದು ಅವಳನ್ನು ಕೇಳಿದೆ.. ಅದಕ್ಕವಳು ಏನೇನೋ ಹೇಳತೊಡಗಿದಳು. ನನಗೆ ಯಾವುದು ಅರ್ಥ ವಾಗಲಿಲ್ಲ. ಕೊನೆಗೆ ಜೀವನದಲ್ಲಿ ಎಂದು ದುರಾಗುವುದು ಬೇಡ ಎಂದು ಒಬ್ಬರನೊಬ್ಬರು ತಬ್ಬಿ ಆಣೆ ಮಾಡಿದೆವು. ನನ್ನ ತಲೆ ಯನ್ನೂ ನೇವರಿಸುತ್ತ ನನ್ನ ಹಣೆಗೊಂದು ಮುತ್ತಿಟ್ಟಳು ನನ್ನವಳು...........! ಇದ್ದಕಿದ್ದಂತೆ ದೂರದಲ್ಲೆಲ್ಲೋ ಟ್ರೈನ್ ಶಬ್ದ ಕೇಳಿಸಿತು. ಏನಾಗುತಿದ್ದೆ ಎಂದು ತಿಳಿಯುವಷ್ಟರಲ್ಲಿ ನನಗೆ ಎಚ್ಚರವಾಗಿ ಬಿಟ್ಟಿತ್ತು!!!!!!!!!!!!!! ;(. ಇಷ್ಟು ಹೊತ್ತು ಕಂಡಿದ್ದು ಬರಿ ಕನಸಾ ?? ಯಾಕೋ ನನ್ನ ಮನಸು ಅದನ್ನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಬರಿ ಹಸಿರು ಹೊದ್ದು ಮಲಗಿದಂತಿದ್ದ ನನ್ನ ಜಗತ್ತಿನಲ್ಲಿ ಮತ್ತೊಮ್ಮೆ ಸುನಾಮಿ ಎದ್ದು ಎಲ್ಲವು ಛಿದ್ರವಾದ ಅನುಬವ.. ಬಾವನೆಗಳ ಗುಡಲ್ಲಿ ಬೆಚ್ಚನೆ ಮಲಗಿದ್ದ ನನಗೆ ಯಾರೋ ಬಡಿದ್ದೆಬಿಸಿದಂತಿತ್ತು.
ಕಣ್ಣಂಚಲ್ಲಿ ಇದ್ದ ಕಣ್ಣಿರನ್ನು ಒರೆಸಿ ಗಡಿಯಾರದ ಕಡೆ ನೋಡಿದೇ . ಬೆಳಗಿನ ೪ ಗಂಟೆ. ಯಾಕೋ ಏನೋ ನನ್ನ ಕೋಣೆಯಲ್ಲಿದ್ದ ಎಲ್ಲ ವಸ್ತುಗಳು ನನ್ನ ನೋಡಿ ನಗುತಿದೆಯೇನೋ ಅನ್ನಿಸಿತು. ಗೆಳೆಯರಿಗೆ ನನ್ನ ಸ್ಟೋರಿ ಹೇಳಿ ಹೊಟ್ಟೆಕಿಚ್ಚು ಬರಿಸಬೇಕೆಂದು ಕೊಂಡಿದ್ದ ನಾನು ಅವರ ಸಾಲಲ್ಲೇ ಕೂತು ಪೆತೋ ಸಾಂಗ್ ಹಾಡಬೇಕಲ್ಲ ಎಂದು ತಿಳಿದು ಬೇಜಾರಾಯಿತು.
ಛೆ!! ವಾಸ್ತವಿಕತೆಯ ಹಂಗೆ ಇಲ್ಲದೆ ಕಂಡ ಕನಸು ಎಷ್ಟು ಚೆನ್ನಾಗಿತ್ತು. ಯಾಕೆ ಈ ಕನಸು ಬಂದಿರಬಹುದು ಎಂದು ಯೋಚಿಸುತ್ತ ಮತ್ತೆ ದಿಂಬಿಗೆ ತಲೆಕೊಟ್ಟೆ . ಆಗಲೇ ಹೊಳೆದಿದ್ದು ಇದು ನಿನ್ನೆ ನೋಡಿದ ಲುಸಿಯಾ ಮೂವಿಯ ಪ್ರಭಾವ ಅಂತ . ಏನೇ ಆದರು ಒಂದ್ಸಲ ಸ್ವರ್ಗಮುಟ್ಟಿ ಬಂದ ಅನುಭವ. ಕ್ಷಣಕಾಲವಾದರೂ ಅವಳು ನನ್ನವಳಾದ ಅನುಭವ ವನ್ನೂ ಧಾರೆ ಎರೆದ ಕನಸಿಗೆ hats off!!!!!
ಬೆಳಿಗ್ಗೆ ಮತ್ತೆ ಎದ್ದಗಲು ಆ ಕನಸಿನ ಬಗ್ಗೆ ಯೋಚಿಸುತಿದ್ದೆ . ಅದೇ ಹೊತ್ತಿಗೆ ಕಾಲ್ ಮಾಡಿದ ಫ್ರೆಂಡ್ ಗೆ ಎಲ್ಲ ವಿಷಯ ತಿಳಿಸಿದೆ. ಅದಕ್ಕೆ ಅವನು "ನನಗು ಆವಾಗವಾಗ ಇತರ ಕನಸು ಬಿಳತ್ತೆ ಅದೆಲ್ಲ ಕೋಮಾನ್ ಮಗ !..ಅಷ್ಟಕ್ಕೂ ಯಾರು ಆ ಹುಡಗಿ ?".
ಆವಾಗಲೇ ಶುರುವಾಗಿದ್ದು ನೋಡಿ CONFUSION !!!..
(ಈ ಬರಹವನ್ನೂ ಶುರೂ ಮಾಡಿದಾಗ ಇದರ ಹೆಸರಿನ ಬಗ್ಗೆ ಸ್ವಲ್ಪ ಅನುಮಾನವಿತ್ತು. ಆದರೆ "ಚಿನ್ಮಯಿ" ಅಂದರೆ conscious ಅನ್ನೋ ಅರ್ಥ ಕೂಡ ಬರತ್ತೆ . So conscious ಮೈಂಡ್ ಮಾಡಿದ ಈ ಕಿತಾಪತಿಗೆ ಈ ಹೆಸರೇ ಸರಿಯಾಗಿದೆ ಅಲ್ವ??? :))

No comments:
Post a Comment