Monday, April 15, 2013

ಮಂಜು ಮುಸುಕಿದ ದಾರಿಯಲ್ಲಿ..............

ನೆನಪುಗಳ ಒಲೆಯನು ಕೆದಕಿ ಕೆದಕಿ ನಿನ್ನೇಕೆ ಹುಡುಕುತಿರುವೆ..
ಕಾಡುವ ನೆನಪುಗಳ ಹೃದಯದಲಿ ಬಚ್ಚಿಟ್ಟು, ನಾನಕೆ ನರಳುತಿರುವೆ....
           ಜೀವನ ಬದಲಾಗಿದೆ... ಕಾಡುಮೆಡು ಸುತ್ತಿ, ಜಗತ್ತಿನ ಪರಿವೆ ಇಲ್ಲದೆ ತನ್ನದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ನಾನು ತಂತ್ರಜ್ಞಾನದ ಸುಳಿಗೆ ಸಿಕ್ಕಿ ಸಂತೋಷದ್ ಅರ್ಥವನ್ನೇ ಮರೆತಿದ್ದೇನೆ ಅನ್ನಿಸುತಿದ್ದೆ.
           ನನ್ನೂರ ಬಿಟ್ಟು ಇಂದಿಗೆ ಸರಿ ಸುಮಾರು ೬ ವರ್ಷಗಳೇ ಕಳೆದಿವೆ. ಹಸಿರು ಸ್ವಚ್ಚಂದ ಕಾನನದ ಹಕ್ಕಿ ಕಾಂಕ್ರಿಟ್ ಕಾಡಿನಲ್ಲಿ ಸುಖ ವಾಗಿರಲು ಸಾದ್ಯವೇ... ಸದಾ ಕಾಡುವ ಬಾಲ್ಯದ ನೆನಪು. ಜೀವನದ ಸಂತೋಷವ ತಿಳಿಸಿ ಕೊಟ್ಟ ಅದೆಸ್ಟೂ ಮಂದಿಯ ಮಾತುಗಳು ಇಂದಿಗೂ ಕಾಡುತ್ತವೆ..
           ಮುರೂರಿನ ಆ ಪರಿಸರ ನನ್ನ ನೆನಪಿನ ಬುತ್ತಿ ಯಲ್ಲಿ ಇಂದಿಗೂ ಹಸಿರಾಗೇ ಇದೆ.. ಸದಾ ತಂಪಾಗಿರುತಿದ್ದ ನಮ್ಮ ಹಳ್ಳಿ ಮನೆ.. ಮನೆ ಎದುರಲ್ಲೇ ಇದ್ದ ದಟ್ಟ ಕಾಡು.. ಅಡಿಕೆ ತೋಟ.. 
ರಾತ್ರಿ ಪೂರ್ತಿ ನಡೆಯುತಿದ್ದ ಯಕ್ಷಗಾನ...ಅಜ್ಜಿ ಮಾಡುತಿದ್ದ  ಒಂದೆಲಗದ  ತಂಬಳಿ.. ಹುಳಿ ಮಾವಿನಕಾಯಿ ಗೊಜ್ಜು.. ದೀಪಾವಳಿಯಂದು ಕುರಿಸುತಿದ್ದ ಬಲಿಂದ್ರ ... ಕೆರೆಯಲ್ಲಿ ದನಗಳನ್ನಮೇಯಿಸಿದ್ದು.. ರಾತ್ರಿ ಅಜ್ಜ ಹೇಳಿ ಕೊಡುತಿದ್ದ ಭಜನೆ ಶ್ಲೋಕಗಳು ಇನ್ನು ನೆನಪಿನಲ್ಲಿವೆ...
          ಸದಾ ಗೆಳೆಯರೊಂದಿಗೆ ಕಾಡನ್ನು ಅಲೆಯುದೇ ನಮ್ಮ ಆಟ.. ನಮ್ಮೆಲ್ಲರಿಗಿಂತ ವಯಸಲ್ಲಿ ಸ್ವಲ್ಪ ದೊಡ್ದವನಿದ್ದ ನಮ್ಮ ಚಿಕ್ಕಪ್ಪ ದಿನುಕಾಕನೆ ನಮ್ಮೆಲ್ಲರಿಗೂ ಹಿರೋ .. ಈಗಿನ ಚೋಟ ಭೀಮ ನಲ್ಲಿ ಬರುವ ಕಾಲಿಯನಂತೆ ಅವನು.ಅವನು ಹೇಳುತಿದ್ದ ಎಲ್ಲ ಸುಳ್ಳು ಕಥೆಗಳನ್ನ ನಂಬಿ ಅವನ ಹಿಂದೆ ಬಾಲದಂತೆ ಅಲೆಯುತಿದ್ದ ಖುಶಿಯೇ ಬೇರೆ.  ಮಣ್ಣಿನಲ್ಲಿ ದೇವಸ್ಥಾನ ಕಟ್ಟಿ ದೇವರನ್ನು ಪುಜಿಸಿದ್ದು. ಮಕ್ಕಳೆಲ್ಲ ಸೇರಿ ಇಟ್ಟ ಸಣ್ಣ ಅಂಗಡಿ ಯನ್ನು ದಿನುಕಾಕ ದಿವಾಳಿ ಮಾಡಿದ್ದು. ಆಲೆಮನೆಯಲ್ಲಿ ಬಿಸಿ ಬೆಲ್ಲ ಚಪ್ಪರಿಸಿದ್ದು. ಕಬ್ಬಿನ  ಗದ್ದೆಯಲ್ಲಿ ಮೈಯೆಲ್ಲಾ ತರಚಿ ಕೊಂಡಿದ್ದು. ಕೊಟ್ಟಿಗೆಯಲ್ಲಿ ಅಡಗಿ ಕೂತು ಹಾಲು ಕರೆಯಲು ಬಂದ ಅಜ್ಜನ ಹೆದರಿಸಿದ್ದು.. ತೋಟದಲ್ಲಿ ಅಮ್ಮನ ಸಿರೆಯನು ಕಟ್ಟಿ ಯಕ್ಷಗಾನ ಕುಣಿದಿದ್ದು ಹೇಗೆತಾನೇ ಮರೆಯಲು ಸಾದ್ಯ. ಸುಮ್ಮನೆ ಮಲಗಿದ್ದ ನಾಯಿಗೆ  ಕಲ್ಲು ಹೊಡೆದು ಅದರಿಂದ ಕಚ್ಚಿಸಿಕೊಂಡ ನೆನಪು ಇಗಲು ನಗೆಯನ್ನ ಮೂಡಿಸುತ್ತದೆ.
ಇದೆಲ್ಲದರ ಜೊತೆಗೆ ನನ್ನ ಅತಿಯಾಗಿ ಕಾಡುತಿದ್ದುದು ನಮ್ಮಜ್ಜಿ ಯಾ ಕೈ ರುಚಿ. ಹೋಳಿಗೆ ,ಹಲಸಿನ ಹಣ್ಣಿನ ರೊಟ್ಟಿ , ಒಂದೆಲಗದ ತಂಬುಳಿ, ಕಬ್ಬಿನ್ ಹಾಲಿನಿಂದ ಮಾಡುತಿದ್ದ ತೋಡದೇವು, ಅಪ್ಪೆ ಮಿಡಿ ಉಪ್ಪಿನಕಾಯಿ ,ನಿರ್ದೋಸೆ ... ಹೆಸರು ಕೇಳೆ ಬಾಯಲ್ಲಿ ನಿರು ಬರುತ್ತಿದೆ..
          ಈಗ ಬೆಂಗಳೂರಲ್ಲಿ ರುಚಿಯೇ ಇಲ್ಲದ ಅಡುಗೆ ತಿಂದು ನಾಲಿಗೆ ಜಡ್ಡು ಹಿಡಿದಿದೆ. ಆ೦ದ್ರ ಮಣಿ ತಂದು ಸುರಿಯುವ ಹಸಿಮೆಣಸಿನ ಸಾಂಬರ ತಿಂದು ತಿಂದು Accidity ಯಂಥ ಬಯಂಕರ ಕಾಯಿಲೆ ಆಗಲೇ ಮೈ ಹೊಕ್ಕಿಯಾಗಿದೆ.....
                ಬದುಕಿಗೆ ನಿಯಮಗಳು-ಕಟ್ಟುಪಾಡುಗಳು  ಬೇಕು ,ಆದರೆ ಅದೇ ಬದುಕಾದರೆ?? ನನಗಾಗಿರೋದು ಅದೇ . ಏನನ್ನೋ ಸಾದಿಸುವ ಹಂಬಲದಲಿ ತನ್ನದೇ ಆದ ಕಟ್ಟುಪಾಡುಗಳ ಸುಳಿಗೆ ಸಿಕ್ಕಿ ಒದ್ದಾಡುತಿದ್ದೇನೆ.. ತಂತ್ರಜ್ಞಾನದ  ಹೆಸರಲ್ಲಿ ದಿನ ದಿನವು ಬೆಳೆಯುತ್ತಿರೋ ಬೆಂಗಳೂರು ನಗರದಲ್ಲಿ ಅತ್ತ ಹಾರೋಕು ಆಗದೆ ಇತ್ತ ಹಾಡೋಕು ಆಗದ ಒಂಟಿ ಹಕ್ಕಿ ಯಂತ್ಹಾಗಿದೆ ಜೀವನ.. ಸದಾ ಕಾಡೋ ಒಂಟಿ ತನ.. ನಂಬಿಕೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಜನರ ಬಾವನೆಗಳೊಂದಿಗೆ ಆಡೋ ಜನಗಳ ಮದ್ಯೆ ನೆಮ್ಮದಿ ಹುಡುಕೋದು ಹೇಗೆ ?
           ಎಲ್ಲ ಬಿಟ್ಟು ಹಳ್ಳಿ ಕಡೆ ಹೋಗಿ ಬರೋಣ ಅಂದ್ರೆ ಅಲ್ಲೂ ಎಲ್ಲವು ಬದಲಾಗಿದೆ. ಮುದ್ದಿಸಿ ಕೈ  ತುತ್ತು ಇಡುತಿದ್ದ ಅಜ್ಜಿ, ಯಕ್ಷಗಾನದ ಹಾಡನ್ನು ಹೇಳಿ ಮಲಗಿಸುತಿದ್ದ ಅಜ್ಜ ಇವರಾರೂ ಇಗಿಲ್ಲ.  ಆ ಮನಸ್ಸಿಗೆ ಮುದ ನಿಡುತಿದ್ದ ಆ ವಾತಾವರಣವು ಈಗಿಲ್ಲ .  ಆ ಹಿಂದಿನ ಎಲ್ಲ ಸಂತೋಷದ ಕ್ಷಣಗಳು ಮತ್ತೆ ಬರಲು ಸಾದ್ಯವಿಲ್ಲ. ಆದರು ಇವೆಲ್ಲದರ ನಡುವೆ ನೆಮ್ಮದಿ ಹುಡುಕೋ ಕೆಲಸವನ್ತು ನಿಂತಿಲ್ಲ . ಆಗಾಗ ಮನಸಿನ ಪುಟಗಳ ಮೇಲೆ ಬಂದು ಸಂತೋಷವ  ನೀಡಿ ಹೋಗೋ ಈ ಸವಿ ನೆನಪುಗಳೇ ನಮ್ಮ ಜೀವನದ ಬೆಸ್ಟ್ ಫ್ರೆಂಡ್.... 
          ಈಗ ನಿಮಗೆ ನಾನು ಆರಂಬದಲ್ಲಿ ಬರೆದ ಎರಡು ಸಾಲುಗಳು ಅರ್ಥವಾಗಿರಬೇಕಲ್ಲ!!! ಇಲ್ಲಿ ನಾ ಹುಡುಕ ಬಯಸಿದ್ದು ಕೈ ಕೊಟ್ಟು ಹೋದ ಹುಡುಗಿಯನ್ನಲ್ಲ ನೆಮ್ಮದಿಯನ್ನ ಅಂತ :)...
 

No comments:

Post a Comment