ನವಿಲು ಗರಿ...
ಆಗಷ್ಟೆ ಪೂರ್ವದಲ್ಲಿ ಸೂರ್ಯದೇವ ತನ್ನ ದಿನಚರಿ ಆರಂಬಿಸಿದ್ದ.. ಮುಂಜಾನೆಯ
ಇಬ್ಬನಿ ಮಂಜು ಕರಗುತಿತ್ತು .. ಆಗಷ್ಟೆ ಎದ್ದು ಅಮ್ಮನನ್ನ
ಹುಡುಕಿ ಹೊರ ಬಂದ ಪುಟ್ಟನಿಗೆ ಆಶ್ಚರ್ಯವೊಂದು ಕಾದಿತ್ತು.. ಮನೆ ಮುಂದಿನ ವಿಶಾಲ ಅಂಗಳದಲ್ಲಿ ಕಾಡಿನ
ಅತಿಥಿಯೊಬ್ಬರು ಬಂದಿದ್ದರು.. ಚುಮು ಚುಮು ಮುಂಜಿನ ನಡುವೆ ಕಂಡ ಆ ಆಕ್ರತಿ ಪುಟ್ಟನಿಗೆ ಎಲ್ಲಿಲ್ಲದ
ಹರುಷ ತಂದಿತ್ತು..
" ಅಪ್ಪಯ್ಯ
, ಅಪ್ಪಯ್ಯ ....ಯಮ್ಮನಿಗೆ ನವಿಲು ಬಂದಿದ್ದು...
ಎನ್ಕೆ ಅದು ಬೇಕು.... ಹಿಡ್ಕೊಡು...ನಾನು ಅದ್ರ
ಸಂಗತ ಆಡ್ತೆ... ಹಿಡ್ಕೊಡು ಅಪ್ಪಯ್ಯ"
ಪುಟ್ಟನ ಕೂಗನ್ನ ಕೇಳಿದ ಅನಂತ ಭಟ್ರು "ಏನಾಯ್ತ ತಮ್ಮ, ಎಂಥ ಹಿಡ್ಕೊಡ್ಬೇಕ ನಿಂಗೆ ?" ಎಂದು ಕೇಳುತ್ತ ಹೊರಬಂದರು. ತಮ್ಮ ಅಂಗಳದಲ್ಲೇ
ಓಡಾಡುತಿದ್ದ ನವಿಲನ್ನ ಕಂಡರು ಅಷ್ಟೇನು ಆಶ್ಚರ್ಯ
ಚಕಿತರಾಗದೆ "ಯವಗ್ಗು ಅದು ಬತ್ತು , ನೀ
ಅದನ್ನ
ನೋಡಿದಿಲ್ಯೇ "ಎಂದರು.
ಆದರು ಹಠ ಬಿಡದ ಪುಟ್ಟ
"ನಂಗ ಅದು ಬೇಕು, ನನ್ನ ಸಂತಿಗೆ ಆಟಾದ್ಲು ಯಾರು ಇಲ್ಲೇ , ನಾ ಅದ್ರ ನನ್ನ ಗೆಳೆಯನ್ನ ಮಾಡ್ಕಂತೆ, ಹಿಡ್ಕೊದು ಅಪ್ಪಯ್ಯ " ಎಂದು ಅಜ್ಜನ ಪಿಡಿಸ ತೊಡಗಿದ.
"ಅದನ್ನ
ಹಿಡ್ಕನ್ದೊಗಿ ನಾಗಿ ಮನೆ ಕೋಳಿ ಗುಡ್ನಾಗೆ ಬಿಟ್ಟು ಸಾಕುವ ಅಪ್ಪಯ್ಯ "
ಪುಟ್ಟನ
ಹಟವ ಕಂಡ ಅನಂತ್ ಭಟ್ಟರು ಅವನ ಸಮಾದಾನ ಪಡಿಸೋಕೆ ಹರ ಸಾಹಸ ಪಟ್ಟರು. ಕೊನೆಗೆ " ತಮ್ಮಣ್ಣ, ನವಿಲ
ಹಕ್ಕಿ ದೇವರ ವಾಹನ, ಅದನ್ನ ಹಿಡದ್ರೆ
ಸುಬ್ಬಣ್ಣ ಶಾಪ ಕೊಡ್ತಾ " ಎಂದರು .
ಅರೆ
ಮನಸಿನಿಂದ ಅದನ್ನ ಒಪ್ಪಿ ಕಾಡಿನ ಕಡೆಯಲ್ಲಿ ಮರೆ ಯಾಗುತಿದ್ದ ನವಿಲನ್ನ ಕಂಡು ಬಿಕ್ಕಿ ಬಿಕ್ಕಿ
ಅತ್ತು.. ಅಮ್ಮನ ಸೆರಗು ಸೇರಿ ಕೊಂಡ.
ಮನೆ
ಕೆಲಸದ ಸುಬ್ಬಿ ಇದನ್ನೆಲ್ಲಾ ದೂರದಿಂದಲೇ ನೋಡಿ "ನಮ್ಮ ಪುಟ್ಟಪ್ಪಂಗೆ ನವಿಲ ಸಂತಿಗೆ ಆಡು ಆಸೆ ಅಂತೆ.
ಪಾಪ ತೀಡಿ ತೀಡಿ ಮುಖ ಎಲ್ಲವ ಕೆಮ್ಪಗಾಗೊಗದೆ
" ಎಂದು ಗೊಣಗುತ್ತಲೇ ಅಂಗಳವನ್ನು ಗುಡಿಸೋಕೆ ಮುಂದಾದಳು.
ಗುಡಿಸುತ್ತಿರುವಾಗ
ಇದ್ದಕಿದ್ದಂತೆ "ಪುಟ್ಟಪ್ಪ ಪುಟ್ಟಪ್ಪ " ಎಂದು ಕೂಗ ತೊಡಗಿದಳು .
ಆಶ್ಚರ್ಯದಿಂದಲೇ
ಹೊರಗೋಡಿ ಬಂದ ಪುಟ್ಟನಿಗೆ ಸುಬ್ಬಿ ಕೈಯಲ್ಲಿದ್ದ ವಸ್ತುವನ್ನ ಕಂಡು ಖುಶಿ ಇಂದ ಕುಣಿದು
ಕುಪ್ಪಳಿಸಿದ...
ಸುಬ್ಬಿ "ಪುಟ್ಟಪ್ಪ , ನವಿಲು ನಿಮಗೆ ಬಹುಮಾನ ಕೊಟ್ಟದೇ, " ಎಂದು ಹೇಳಿ ನವಿಲು ಗರಿಯನ್ನ ಪುಟ್ಟನ ಕೈ
ಗಿತ್ತಳು...
ಅದನ್ನ ಹಿಡ್ಕೊಂಡು
ಒಂದೇ ಓಟದಲ್ಲಿ ಅಮ್ಮನ ಮುಂದೆ ಪ್ರತ್ಯಕ್ಷನಾದ "ಆಯಿ, ಇಲ್ನೋದೆ
ನಂಗೆ ನವಿಲು ಬಹುಮಾನ
ಕೊಟ್ಟಿದ್ದು " ಎಂದು ನವಿಲು ಗರಿಯನ್ನು ಅಮ್ಮನಿಗೆ ತೋರಿಸ ತೊಡಗಿದ.
ಅಮ್ಮಾ "ಅದನ್ನ ಜೋಪನವಗೆ ಇಟ್ಕೊಳವು" ಎಂದಳು ..
ಅಂದು
ಬೆಳಗಿನಿಂದ ಸಂಜೆಯ ವರೆಗೆ ಒಂದು ಕ್ಷಣವೂ ಆ ಗರಿ ಇಂದ ದುರಾಗದ ಪುಟ್ಟ. ಕೃಷ್ಣನಂತೆ ತಾನು ತಲೆಗೆ ಅದನ್ನ ಕಟ್ಟಿ ಕೊಂಡು ಕುಣಿದಾಡಿದನು.ಮನೆಗೆ
ಬಂದವರಿಗೆಲ್ಲ ಅದನ್ನ ತೋರಿಸಿ ಖುಶಿ
ಪಟ್ಟಿದ್ದನು .
ಆ ಸುಂದರವಾದ ನವಿಲು ಗರಿ ಪುಟ್ಟನ ಕಣ್ಣಲ್ಲಿ ನೂರಾರು ಸುಂದರ ಚಿತ್ರಗಳನ್ನೂ
ಮುಡಿಸುತಿದ್ದವು.. ಅದು ನಮ್ಪುಟ್ಟನಿಗೆ ಬರಿ
ನವಿಲು ಗರಿಯಾಗಿರಲಿಲ್ಲ ಕಲ್ಪನೆಯ ಲೋಕದಲ್ಲಿ ಅವನನ್ನು ತೆಲಿಸುತಿದ್ದ ಮಾಯಾ ದಂಡವಾಗಿತ್ತು. ಮಲಗುವಾಗ ಕೂಡಾ
ಅದನ್ನ ತನ್ನ ಪಕ್ಕದಲ್ಲೇ ಪುಟ್ಟ ಮಗುವಿನಂತೆ
ಮಲಗಿಸಿಕೊಂಡು ಅದರಲ್ಲಿನ ಸಾವಿರ ಬಣ್ಣಗಳಿ೦ದ ಮನದ ಪಟದ ಮೇಲೆ ಸುಂದರ ಚಿತ್ರಗಳನ್ನ
ಬಿಡಿಸಿಕೊಳ್ಳುತ್ತಾ ಅಮ್ಮನ ಮಡಿಲಿಂದ
ನಿದ್ರಾದೇವತೆಯ ಮಡಿಲಿಗೆ ಜಾರಿದ್ದ..