Wednesday, May 23, 2012

ಮೇಸ್ಟ್ರು ಹೇಳಿದ ಕಥೆ....

           ಆಗಲೇ ಸಮಯ ೩ ಆಗಿತ್ತು. ಶಾಲಾ ಕೊಟಡಿ ಯೊಳಗೆ ಕೂತಿದ್ದ ನಮಗೆ ಅದು ಇಂಗ್ಲೀಷ್ ಕ್ಲಾಸಿನ ಸಮಯ. ಆದರೆ ಅದು ನಮಗೆ ನಿದ್ದೆ ಯ ಸಮಯ ಕೂಡ ಹೌದು !!! ಕಣ್ಣು ಮುಚ್ಚದೇ ನಿದ್ದೆ ಮಾಡುವ ಕಲಾವಿದರಿಂದ ಹಿಡಿದು ತೂಕಡಿಸಿ ಬೀಳುವ ಯೋಗಿ ಗಳು ನಮ್ಮ ಕ್ಲಾಸಿನಲ್ಲಿ ಇದ್ದರು. ನಮಗೆ ಇಂಗ್ಲಿಷ್ ಕ್ಲಾಸ್ಸೆಂದರೆ ಸ್ವಲ್ಪ ಅಚ್ಚು ಮೆಚ್ಚು. ಕಾರಣ ಅದನ್ನು ಬೋದಿಸುತಿದ್ದುದು "S.J.ಕೈರನ್ನ " ಮೇಸ್ಟ್ರು .  ಇವರ ಬಗ್ಗೆ ಹೇಳಬೇಕೆಂದರೆ ಅತ್ಯಂತ ಚಾಣಕ್ಷ ,ತನ್ನ ಮಾತಿನಿಂದ  ಎಂತವರನ್ನು ಮೂಕ ವಿಸ್ಮಿತರನ್ನಾಗಿ ಮಾಡಬಲ್ಲ  ವಾಗ್ಮಿ. "ಇಂಗ್ಲೀಷಿನಲ್ಲಿ ಒಂದು ಮಾತಿದೆ" ಎಂದು ಶುರುವಾಗುತಿದ್ದ ಅವರ ಭಾಷಣ ಕೇಳುವುದೇ ಒಂದು ರೋಮಾಂಚನ.
         ಅಂದು  ಕೂಡ ಲಗು ಬಗೆ ಇಂದ ಕ್ಲಾಸ್ಸನ್ನು  ಪ್ರವೇಶಿಸಿದ ಮೇಸ್ಟ್ರಿಗೆ ನಮ್ಮ ಪರಿಸ್ಥಿತಿ ಕಂಡು ಮರುಕ ಹುಟ್ಟಿರ ಬೇಕು. ಅದಕ್ಕೆ ಇವತ್ತು ನಾನು ನಿಮಗೆ ಯಾವುದೇ ಪಾಠ ಮಾಡುವುದಿಲ್ಲ ಎಂದರು.  ಅದನ್ನ ಕೇಳಿದ ಎಲ್ಲರಿಗೂ ಖುಷಿ ಯಾಗಿತ್ತು.. ಆದರೆ ಕೆಲವರಿಗೆ ಅಪಾಯದ ವಾಸನೆ ಬಂದಿದ್ದು ಕೂಡ ನಿಜ. ಇವತ್ತು ನಾವು ಕಷ್ಟದ ಬಗ್ಗೆ ಮಾತಾಡೋಣ ಎಂದರು. ಆಗಲೇ ನಮಗೆ ನಮ್ಮ ಮುಂದಿರುವ  ಅಪಾಯದ ಸ್ಪಷ್ಟ  ಚಿತ್ರಣ ಲಭಿಸಿತ್ತು. ಕಾರಣ ಒಮ್ಮೆ ಅವರು ಮಾತು ಶುರು ಮಾಡಿದರೆ ಶಾಲೆಯ ಸಮಯ ಮುಗಿದರು ಬಿಡುತ್ತಿರಲಿಲ್ಲ. ಹಾಗು ಅಸ್ಟೊಂದು ಮಾತನ್ನು ಕೇಳುವ ತಾಳ್ಮೆ ಯಾಗಲಿ ಸಹನೆ ಯಾಗಲಿ ನಮ್ಮಲ್ಲಿ ಇರಲಿಲ್ಲ. ಆದರು ಅದನ್ನು ವಿರೋಧಿಸುವ ಧೈರ್ಯವು ಇರಲಿಲ್ಲ.
        ಕೈರನ್ನ  "ಕಷ್ಟ ಎಂದರೇನು ? " 
        ಹಿಂದಿನ ಬೆಂಚಿನಿಂದ ಪಿಸು ದನಿ ಯಲ್ಲಿ  ಬಂದ ಉತ್ತರ  "ನೀವೀಗ ನಮಗೆ ಕೊಡುತಿರುವುದು".
        ಎಲ್ಲರು ಜೋರಾಗಿ ನಗ ತೊಡಗಿದ್ದರು.. ಈ ನಗುವಿನಲ್ಲೇ ಎಲ್ಲರ ನಿದ್ದೆಯು ಮಾಯಾವಾಗಿತ್ತು. 
       ಇದನ್ನು ಸಹಿಸಿ ಕೊಂಡ ಮೇಸ್ಟ್ರು  ಒಂದು ಕಥೆಯನ್ನ ಹೇಳೋಕೆ ಮುಂದಾದರು.. ಕಥೆ ಎಂದ ಕೂಡಲೇ ಎಲ್ಲರ ಕಿವಿಯು ನೆಟ್ಟಗಾಗಿದ್ದು ನಿಜ.

ಕೈರನ್ನ್     " ಒಂದು ಊರಿನಲ್ಲಿ ಒಬ್ಬ ಮನುಷ್ಯ ದೇವರನ್ನ ಕುರಿತು ತಪಸ್ಸು ಮಾಡಲು ಸಮುದ್ರ ತೀರಕ್ಕೆ ಹೋಗುತ್ತಾನೆ !!!
ಎಲ್ಲರು ತಪಸ್ಸು ಮಾಡಲು ಕಾಡಿಗೆ ಹೋದರೆ ಇವನ್ಯಾರೋ ತಪಸ್ಸು ಮಾಡಲು  ಸಮುದ್ರ ತೀರಕ್ಕೆ ಯಾಕೆ ಹೋಗುತ್ತಾನೆ ಎಂಬುದು ನಮಗೆ ಕಾಡಿದ ಪ್ರಶ್ನೆ...  ಏನೇ ಇರಲಿ ಮತ್ತೆ ಕಥೆ ಗೆ ಹೋಗೋಣ ..

   "ಸಮುದ್ರ ತೀರದಲ್ಲಿ ಗೊರವಾದ ತಪಸನ್ನು ಮಾಡಿ ದೇವರನ್ನು ಮೆಚ್ಚಿಸುತ್ತಾನೆ " 
   ನಮಗೆ ಕಾಡಿದ ಇನ್ನೊಂದು ಪ್ರಶ್ನೆ. " ಯಾವ ದೇವರು ??" 

       "ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ದೇವರು ವರವನ್ನು ಬೇಡು ವಂತೆ ಕೇಳುತ್ತಾನೆ. ಇದಕ್ಕೆ ಆ ಬುದ್ದಿವಂತ ಮಾನವ 'ನಾನು ನನ್ನ ಜೀವನ ಮುಗಿಸುವರೆಗೂ ನೀನು ನನ್ನ ಜೊತೆ ಇರಬೇಕು ' ಎಂದು ವರ ಬೇಡುತ್ತಾನೆ "

       "ದೇವರು ಇದಕ್ಕೆ ಒಪ್ಪಿ ಅವನ ಜೊತೆ ಜೀವನ ಪಯಣದಲ್ಲಿ ಜೊತೆ ಯಾಗಿ ಸಮುದ್ರ ತೀರದಲ್ಲಿ ನಡಿಯುತ್ತಾನೆ "
      "ಆ ಮನುಷ್ಯ ತುಂಬಾ ಸಂತೋಷ ವಾಗಿರುವ ಸಮಯದಲ್ಲಿ ಹಿಂದುರುಗಿ ನೋಡಿದಾಗ ೨ ಜೊತೆ ಹೆಜ್ಜೆ ಗುರುತು ಗಳು ಮರಳಿನಲ್ಲಿ ಮೂಡಿರುತ್ತವೆ. ದೇವರು ನನ್ನ ಜೊತೆಯಲ್ಲೇ ಇರುವನೆಂದು ಸಂತೋಷದಿಂದ ಮುಂದುವರಿಯುತ್ತಾನೆ "
 ಈಗ ನಮ್ಮ ಮೊದಲನೇ ಪ್ರಶ್ನೆ ಗೆ ಉತ್ತರ  ದೊರತಿತ್ತು.

Back to story "ಸ್ವಲ್ಪ ದೂರ ಸುಖ ಜೀವನದಲ್ಲಿ ಸಾಗಿದಾಗ ಅವನಿಗೆ ಕಷ್ಟದ ದಿನಗಳು ಶುರುವಾಗತ್ತೆ. ಆತ ಮತ್ತೆ ಹಿಂದುರುಗಿ ನೋಡುತ್ತಾನೆ. ಏನ್ ಆಶ್ಚರ್ಯ! ಸುಖದ ದಿನದಲ್ಲಿ ಜೊತೆ ಗಿದ್ದ ದೇವರ ಹೆಜ್ಜೆ ಗುರುತು ಗಳು ಈಗ ಮಾಯಾ. ಒಂದೇ ಜೊತೆ ಆಳ ವಾಗಿರುವ ಹೆಜ್ಜೆ ಗುರುತು ಮಾತ್ರ ಮೂಡಿವೆ!" 

     ಈಗ ನಮ್ಮ ತಲೆ ಗೆ ಹೊಳೆದ ಹಾಡು "ಕಾಣದಂತೆ ಮಾಯವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು".

ಏನೇ  ಇರಲಿ "ಹಾಗೆ ಸ್ವಲ್ಪ ದೂರ ಸಾಗಿದ ನಂತರ ಮತ್ತೆ ಸುಖದ ದಿನಗಳು ಶುರು ವಾಗುತ್ತದವೆ . ಆಗಲು ಆ ಮಾನವ ಮತ್ತೆ ಹಿಂದುರುಗಿ ನೋಡುತ್ತಾನೆ....ಆಶ್ಚರ್ಯ!!!! ಕಷ್ಟದ ದಿನದಲ್ಲಿ ಮಾಯಾ ವಾಗಿದ್ದ ದೇವರ ಹೆಜ್ಜೆ ಗುರುತು ಮತ್ತೆ ಪ್ರತ್ಯಕ್ಷ ವಾಗಿರುತ್ತದೆ ".

      ಈಗ ಮಾನವನಿಗೆ ತುಂಬಾ ಕೋಪ ಬರುತ್ತದೆ .. ದೇವರನ್ನು ಕೇಳುತ್ತಾನೆ
 "ಅಯ್ಯ ದೇವರೇ ಸುಖ ದ ಸಮಯದಲ್ಲಿ ಜೊತೆ ಗಿದ್ದ  ನಿನ್ನ ಹೆಜ್ಜೆ ಗುರುತು ಕಷ್ಟ ದ ಸಮಯದಲ್ಲಿ ಏಕೆ ಮಾಯಾ ವಾಗಿತ್ತು ??" 
ಇದು ಆ ಸಮಯದಲ್ಲಿ ನಮಗೆ ಕಾಡಿದ ಪ್ರಶ್ನೆಯು ಹೌದು ..

      ದೇವರು ಈಗ ನಗು ನಗುತ್ತ ಹೇಳುತ್ತಾನೆ    "ಅಯ್ಯಾ  ಮೂರ್ಖ , ಕಷ್ಟದ ಸಮಯದಲ್ಲಿ ಇರುವ ಆ ಹೆಜ್ಜೆ ಗುರುತು ಅದು ನಿಂದಲ್ಲ, ಅದು ನನ್ನ ಹೆಜ್ಜೆ ಗುರುತು . ನೀನು ಸುಖದಲ್ಲಿ ಇರುವಾಗ ನಿನ್ನ ಜೊತೆ ನಡೆದೇ . ಆದರೆ ನೀನು ಕಷ್ಟ ದಲ್ಲಿ ಇರುವಾಗ ನಿನ್ನ ನಾನು ಎತ್ತಿ ಕೊಂಡು ಸಾಗಿದೆ " ಎಂದ .
    
      ಈ ಕಥೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು.. ಆ ದಿನ ರಾತ್ರಿ ಪೂರ್ತಿ ಇದರ ಬಗ್ಗೆ ಯೋಚನೆ ಮಾಡಿದೆ. ಯಾವಾಗಲು ನಾನು ಕಷ್ಟ ದಲ್ಲಿ ಇರುವೆನೆಂದು ಅನಿಸಿದಾಗ ನನಗೆ ಈ ಕಥೆ ನೆನಪಾಗುತ್ತದೆ.. ಜೀವನದ ಎಲ್ಲ ಸಮಯದಲ್ಲೂ ದೇವರು ನಿಮ್ಮ ಜೊತೆ ಇರುತ್ತಾನೆ ಎಂದು ಧೈರ್ಯ ತುಂಬಿದ ಕಥೆಗು , ಕಥೆ ಯನ್ನೂ ಹೇಳಿದ ಕೈರನ್ನರಿಗೂ ಹೆಟ್ಸ್ ಆಫ..

 ಆದರೆ  ಮುಂದಿನ ಮೂರು ವರ್ಷ ಗಳಲ್ಲಿ ಇದೆ ಕಥೆಯನ್ನೂ ೧೫-೨೦ ಬಾರಿ ಕೆಳ ಬೇಕಾಗಿ ಬಂತು. ಆ ಸಮಯದಲ್ಲೆಲ್ಲ ದೇವರು ನಮ್ಮನ್ನು ಹೊತ್ತು ಸಾಗುತಿರುವನೆಂಬ ಭಾವ ನಮ್ಮದು !!!!